Vishwaprajna School

Message from SRI M N KRISHNA SWAMY

SRI M N KRISHNA SWAMY – Working President

ಹೀಗೊಂದು ಮಾತು…..

ವಿಶ್ವ ಪ್ರಜ್ಞ ವಿದ್ಯಾಸಂಸ್ಥೆಯು 30 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. ಒಂದು ಸಂಸ್ಥೆಯ ಇತಿಹಾಸದಲ್ಲಿ 30 ವರ್ಷಗಳು ಅಷ್ಟೇನು ದೀರ್ಘವಲ್ಲದಿದ್ದರೂ, ವಿದ್ಯಾ ಕ್ಷೇತ್ರದಲ್ಲಿ ಸಾರ್ಥಕ ಸೇವೆಯನ್ನು ಸಲ್ಲಿಸಿ ಉತ್ತಮ ವಿದ್ಯಾಸಂಸ್ಥೆ ಎಂಬ ಕೀರ್ತಿ ಗಳಿಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಹೆಸರಾಂತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಿಶ್ವ ಪ್ರಜ್ಞ ವಿದ್ಯಾಸಂಸ್ಥೆಯು ದಿವಂಗತ ಶ್ರೀ ಮಹದೇವಯ್ಯನವರ ದೂರ ದೃಷ್ಟಿಯ ಫಲವಾಗಿ 1996ರಲ್ಲಿ ಮೈಸೂರಿನ ಶಾರದಾದೇವಿ ನಗರದಲ್ಲಿ ನರ್ಸರಿ ಶಾಲೆಯನ್ನು ಪ್ರಾರಂಭಿಸಲಾಯಿತು. ಕ್ರಮೇಣ 1997ರಲ್ಲಿ ಪ್ರಾಥಮಿಕ ಶಾಲೆ, 2005ರಲ್ಲಿ ಪ್ರೌಢಶಾಲೆ, 2014ರÀಲ್ಲಿ ಸಂಯುಕ್ತ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಯಿತು. 2008ರಲ್ಲಿ ಈಗಿನ ಸ್ವಂತ ಕಟ್ಟಡಕ್ಕೆ ವಿದ್ಯಾ ಸಂಸ್ಥೆಯನ್ನು ಸ್ಥಳಾಂತರಿಸಲಾಯಿತು. ಈಗ ಮೇಲ್ಕಂಡ ಎಲ್ಲಾ ತರಗತಿಗಳು ದಟ್ಟಗಳ್ಳಿಯಲ್ಲಿರುವ ಸುಸಜ್ಜಿತವಾದ ಸ್ವಂತ ಕಟ್ಟಡದಲ್ಲಿಯೇ ನಡೆಸಲಾಗುತ್ತಿದೆ.

ನಾಗಾಲೋಟದಲ್ಲಿ ಓಡುತ್ತಿರುವ ಇಂದಿನ ಯುಗದಲ್ಲಿ ಸ್ಪರ್ಧೆ ಅನಿವಾರ್ಯ. ಈ ಸ್ಪರ್ಧೆಯಲ್ಲಿ ಭಾಗವಹಿಸಿದರಷ್ಟೇ ಸಾಲದು, ನಾವು ಪ್ರಥಮರಲ್ಲಿ ಪ್ರಥಮರಾಗಬೇಕೆಂಬ ಧ್ಯೇಯ, ಧೋರಣೆಯೊಂದಿಗೆ ಎಲ್ಲಾ ರಂಗಗಳಲ್ಲಿ ವಿದ್ಯಾರ್ಥಿಗಳು ಪರಿಣಿತಿಯನ್ನು ಗಳಿಸಲು ನಮ್ಮ ಶಾಲೆಯಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಸ್ಮಾರ್ಟ್‍ಬೋರ್ಡ್ ಅಳವಡಿಸಿರುವ ಉತ್ತಮ ಗಾಳಿ ಬೆಳಕನ್ನು ಹೊಂದಿರುವ ವಿಶಾಲವಾದ ತರಗತಿಗಳು, ವಿಜ್ಞಾನದ ಪ್ರಯೋಗಾಲಯ, ಕಂಪ್ಯೂಟರ್ ಪ್ರಯೋಗಾಲಯ, ವಾಚನಾಲಯ, ಒಳಾಂಗಣ ಆಟದ ಕೊಠಡಿಗಳು, ವಿಶಾಲವಾದ ಹೊರಾಂಗಣ ಆಟದ ಮೈದಾನ, ಗಿಡಮರಗಳಿಂದ ಕೂಡಿದ ಆರೋಗ್ಯಕರವಾದ ಸುಂದರ ಪರಿಸರವಿದೆ. ತರಗತಿಯ ಪಾಠ ಪ್ರವಚನಗಳಷ್ಟೆ ಅಲ್ಲದೆ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳಿದೆ. ಸುಸಜ್ಜಿತ ಬ್ಯಾಂಡ್ ದಳವಿದೆ. ‘ಪ್ರಜ್ಞಾ’ ವಾರ್ಷಿಕ ಸಂಚಿಕೆಯನ್ನು ಪ್ರತೀ ವರ್ಷವೂ ಹೊರತರಲಾಗುತ್ತಿದೆ. ಸಂಗೀತ, ನೃತ್ಯ, ಕರಾಟೆ, ಚದುರಂಗ, ರೋಬೋಟಿಕ್ಸ್, ಅಬಾಕಸ್, ಮುಂತಾದ ಕಲೆಗಳನ್ನು ಕಲಿಯಲು ಅವಕಾಶವನ್ನು ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳ ಕಲಿಕೆಯನ್ನು ಪೆÇ್ರೀತ್ಸಾಹಿಸಲು ಪ್ರತಿ ತರಗತಿಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 5,000/-ರೂ.ಗಳ ಸ್ಕಾಲರ್‍ಶಿಪ್, 10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಹಾಗೂ ಪ್ರತಿ ವಿಷಯಗಳಲ್ಲಿ ಅತ್ಯಂತ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ 1,000/- ರೂ.ಗಳ ಪೆÇ್ರೀತ್ಸಾಹ ಧನವನ್ನು ನೀಡಲಾಗುತ್ತಿದೆ. ನಮ್ಮ ಶಾಲೆಯಲ್ಲಿ 3 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಹೀಗೆ ಒಂದು ಆದರ್ಶ ವಿದ್ಯಾಸಂಸ್ಥೆಯ ಎಲ್ಲಾ ಸದ್ಗುಣಗಳನ್ನು ಮೈಗೂಡಿಸಿಕೊಂಡು ವಿಶ್ವಪ್ರಜ್ಞ ವಿದ್ಯಾಸಂಸ್ಥೆ, ಪ್ರಗತಿಯ ದಾಪುಗಾಲಿನ ಪುರೋಭಿವೃದ್ಧಿಯನ್ನು ಹೊಂದಲು ಕಾರಣ ಸದಾ ಹಸನ್ಮುಖದಿಂದ ದಣಿÀವರಿಯದೆ ದುಡಿಯುತ್ತಿರುವÀ ಅಧ್ಯಾಪಕ ವೃಂದ, ನಿಸ್ವಾರ್ಥ ಸೇವಾ ಮನೋಭಾವದ ಆಡಳಿತ ಮಂಡಳಿ, ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿರುವ ಪೆÇೀಷಕ ವೃಂದದ ತ್ರಿವೇಣಿ ಸಂಗಮದಿಂದ ನಮ್ಮ ಶಾಲೆಯ ಬಾವುಟ ಇಂದು ಗಗನಚುಂಬಿಯಾಗಿದೆ. ಎಂದೆಂದೂ ಹೀಗೆಯೇ ಏರಲಿ ಹಾರಲಿ ನಮ್ಮ ಶಾಲೆಯ ಬಾವುಟ.

‘ಸರ್ವೇಜನಾಃ ಸುಖಿನೋ ಭವಂತು’

 

Scroll to Top